ಮಿಲನ ನಾಗರಾಜ್ (ಜನನ ೨೫ ಏಪ್ರೀಲ್ ೧೯೮೯) ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾಗಿದ್ದರು. == ಜನನ == ಇವರು ೨೫ ಏಪ್ರೀಲ್ ೧೯೮೯ ರಲ್ಲಿ ಹಾಸನದಲ್ಲಿ ಜನಿಸಿದರು. == ಶಿಕ್ಷಣ == ಅವರು ತನ್ನ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಹಾಸನದಲ್ಲಿಯೇ ತೆಗೆದುಕೊಂಡರು. ಅವರು ಬ್ಯಾಚುಲರ್ ಇನ್ ಕಂಪ್ಯೂಟರ್ ಸಾಯನ್ಸ್. ಬೆಂಗಳೂರಿನ ವಿಕೆಐಟಿ ಕಾಲೇಜಿನಿಂದ ಎಂಜಿನಿಯರಿಂಗ್ ಮಾಡಿದರು. ಬಾಲ್ಯದಿಂದಲೂ ಅವರು ಉತ್ತಮ ಈಜುಗಾರ್ತಿ. == ಜೀವನ == ಇವರು ೧೨ ನೇ ತರಗತಿಯಲ್ಲಿ ಇರುವಾಗ ಬೋರ್ಡ್ ಪರೀಕ್ಷೆಗೆ ಕೆಲವೇ ತಿಂಗಳುಗಳ ಮೊದಲು ಇವರು ಅಪಘಾತಕ್ಕೀಡಾದರು. ಇವರ ಕಾಲಿನ ಮೂಳೆ ತುಂಬಾ ಕೆಟ್ಟದಾಗಿ ಮುರಿದುಹೋಗಿತ್ತು. ಈ ದುರಂತದಿಂದ ಇವರಿಗೆ ಈಜಲು ಸಾಧ್ಯವಾಗಲಿಲ್ಲ. ನಂತರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಎಂಜಿನಿಯರಿಂಗ್ ಗೆ ಆಯ್ಕೆಯಾದರು. ನಂತರ ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾದರು. ನಂತರ ಅವರು ೨೦೧೩ ರಲ್ಲಿ ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. == ಫಿಲ್ಮೊಗ್ರಾಫಿ == == ಉಲ್ಲೇಖಗಳು ==